ಚೀನಾದಲ್ಲಿ ಭೀಕರ ಅಪಘಾತ; 27 ಮಂದಿ ದಾರುಣ ಸಾವು

ಬೀಜಿಂಗ್; ಚೀನಾದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ 27 ಜನರು ಸಾವನ್ನಪ್ಪಿದ್ದಾರೆ. ಇದು ಈ ವರ್ಷ ಚೀನಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಟ್ಟು 47 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ರಸ್ತೆ ಬದಿಗೆ ಪಲ್ಟಿಯಾಗಿದೆ. ಈ ದುರ್ಘಟನೆ ಗ್ರಾಮೀಣ ಗೈಝೌ ಪ್ರಾಂತ್ಯದ ಹೆದ್ದಾರಿಯಲ್ಲಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ಸ್ಥಳ ಅಲ್ಪಸಂಖ್ಯಾತ ಹಾಗೂ ಬಡ ಕುಟುಂಬಗಳಿರುವ ದೂರದ ಪರ್ವತ ಪ್ರದೇಶವಾಗಿದೆ. ಘಟನಾ ಸ್ಥಳಕ್ಕೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುವವರನ್ನು ಕಳುಹಿಸಲಾಗಿದ್ದು, ಬಸ್‌ನಲ್ಲಿದ್ದ ಉಳಿದ 20 ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

 

 

Share Post

Leave a Reply

Your email address will not be published.