ಸಹಾಯಕಿ ಮೇಲೆ ರಶ್ಮಿಕಾ ಮಂದಣ್ಣ ರೇಗಾಡಿದ್ದೇಕೆ..?; ರೆಕಾರ್ಡಿಂಗ್‌ ನಿಲ್ಸಿ ಅಂತ ನ್ಯಾಷನಲ್‌ ಕ್ರಶ್‌

ಹೈದರಾಬಾದ್‌; ನ್ಯಾಷನಲ್‌ ಕ್ರಶ್‌ ಎಂದೇ ಖ್ಯಾತಿ ಗಳಿಸಿರುವ ನಟಿ ರಶ್ಮಿಕಾ ಮಂದಣ್ಣ, ಚಿತ್ರೀಕರಣದ ವೇಳೆ ಸಹಾಯಕಿ ಮೇಲೆ ಕೋಪಗೊಂಡು ರೇಗಾಡಿದ್ದಾರೆ. ಏನ್‌ ನಡೀತಾ ಇದೆ ಇಲ್ಲಿ? ಟ್ಯಾಲೆಂಟ್‌ಗೆ ಬೇಲೇನೇ ಇಲ್ಲ ಇಲ್ಲಿ. ಎಲ್ಲಿ ಬೆಲೆ ಇದೆಯೋ ನಾನು ಅಲ್ಲಿಗೇ ಹೋಗ್ತೀನಿ ಅಂತ ರಶ್ಮಿಕಾ ಸಿಟ್ಟು ಮಾಡ್ಕೊಂಡಿದ್ದಾರೆ. ಇನ್ನು ಮೊಬೈಲ್‌ನಲ್ಲಿ ಅದನ್ನು ರೆಕಾರ್ಡ್‌ ಮಾಡುತ್ತಿರುವುದರನ್ನು ನೋಡಿ ಆಫ್‌ ಮಾಡುವಂತೆಯೂ ಸಿಬ್ಬಂದಿಗೆ ರಶ್ಮಿಕಾ ರಾಕೀತು ಮಾಡಿದ್ದಾರೆ.

ಯಾಕೆ ಹೀಗಾಯ್ತು ಅಂತ ಎಲ್ಲರೂ ತಲೆ ಕೆಡಿಸಿಕೊಂಡಿದ್ದರು. ಅಭಿಮಾನಿಗಳಿಂದ ಸಿಟ್ಟಾಗಿದ್ದರು. ಆದ್ರೆ ಇದು ಡ್ರಾಮಾ ಅನ್ನೋದು ಗೊತ್ತಾಗೋದಕ್ಕೆ ಹೆಚ್ಚು ಹೊತ್ತು ಹಿಡಿಯಲಿಲ್ಲ. ರಶ್ಮಿಕಾ ಮಂದಣ್ಣ ಅವರು ಖಾಸಗಿ ಜಾಹೀರಾತಿಗಾಗಿ ಈ ರೀತಿ ಮಾಡಿದ್ದಾರೆ. ಅದು ಪ್ರಸಾರವಾಗುವುದಕ್ಕೂ ಮೊದ್ಲು ಜನರಲ್ಲಿ ಕುತೂಹಲ ಮೂಡಿಸೋದಕ್ಕಾಗಿ ಈ ವಿಡಿಯೋ ವೈರಲ್‌ ಮಾಡಲಾಗಿದೆ.

Share Post