ಕಾಂತಾರಾ ವೇಷದಲ್ಲಿ ಎಂಟ್ರಿ ಕೊಟ್ಟ ತಹಸೀಲ್ದಾರ್‌; ಎಲ್ಲರಿಗೂ ಅಚ್ಚರಿಯೋ ಅಚ್ಚರಿ..!

ಗುಂಟೂರು; ಕನ್ನಡದ ಕಾಂತಾರಾ ಸಿನಿಮಾ ಇಡೀ ವಿಶ್ವದಲ್ಲೇ ಸದ್ದು ಮಾಡಿದ್ದು, ಮಾಡ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇದರ ಕ್ರೇಜ್‌ ಯಾವ ಮಟ್ಟಿಗೆ ಇದೆ ಅಂದ್ರೆ ಕಾಂತಾರಾ ಸಿನಿಮಾ ವೇಷ ಹಾಕಿಕೊಳ್ಳುವಷ್ಟರ ಮಟ್ಟಿಗೆ. ಅದೂ ನಮ್ಮ ರಾಜ್ಯದಲ್ಲಿ ಅಲ್ಲ, ನೆರೆಯ ಆಂಧ್ರಪ್ರದೇಶದಲ್ಲಿ ಕಾರ್ಯಕ್ರಮವೊಂದಕ್ಕೆ ತಹಸೀಲ್ದಾರ್‌ ಒಬ್ಬರು ಕಾಂತಾರಾ ರೀತಿಯ ಡ್ರೆಸ್‌ ಮಾಡಿಕೊಂಡು ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಗುಂಟೂರಿನ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಆಂಧ್ರದ ತೆರಿಗೆ ಇಲಾಖೆ ವತಿಯಿಂದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದ್ರಲ್ಲಿ ವಿಜಯನಗರಂ ಜಿಲ್ಲೆಯಲ್ಲಿ ಕೆಲಸ ಮಾಡುವ ತಹಶೀಲ್ದಾರ್​ ಪ್ರಸಾದ್​ ರಾವ್​ ಎಂಬುವವರು ಕಾಂತಾರ ಗೆಟಪ್‌ನಲ್ಲಿ ಬಂದು ಎಲ್ಲರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ ವೇದಿಕೆ ಮೇಲೆ ಕಾಂತಾರಾ ಚಿತ್ರದ ಡೈಲಾಗ್‌ ಹೇಳಿ ಎಲ್ಲರನ್ನೂ ರಂಜಿಸಿದ್ದಾರೆ.

ತಹಶೀಲ್ದಾರ್​ ಪ್ರಸಾದ್​ ರಾವ್​ ಅವರಿಗೆ ಕಲೆಯಲ್ಲಿ ಮೊದಲಿನಿಂದಲೂ ಹೆಚ್ಚು ಆಸಕ್ತಿ ಇದೆಯಂತೆ. ಹೀಗಾಗಿಯೇ ಅವ್ರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಶೇಷವಾಗಿ ಬಂದಿದ್ದಾರೆ. ತಹಸೀಲ್ದಾರ್‌ರನ್ನು ನೋಡಿ ಜಿಲ್ಲಾಧಿಕಾರಿ ಕೂಡಾ ಖುಷಿ ವ್ಯಕ್ತಪಡಿಸಿದ್ದಾರೆ.

Share Post