ಹಿರಿಯ ನಟ ಲಕ್ಷ್ಮಣ ಹೃದಯಘಾತದಿಂದ ಸಾವು

ಬೆಂಗಳೂರು; ಕನ್ನಡ ಚಿತ್ರರಂಗದ ಹಿರಿಯ ನಟ ಲಕ್ಷ್ಮಣ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಬೆಳಗ್ಗೆ ಲಕ್ಷ್ಮಣ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ವಾರನ್ನು ಕೂಡಲೇ ಆಸ್ಪತ್ರೆ ಕರೆದೊಯ್ಯಲಾಯ್ತು. ಆದ್ರೆ ಮಾರ್ಗಮಧ್ಯೆಯೇ ಅವ್ರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 

ಲಕ್ಷ್ಮಣ ಅವರು ಮೂಡಲಪಾಳ್ಯದ ನಿವಾಸದಲ್ಲಿ ವಾಸಿಸುತ್ತಿದ್ದರು. ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮೂಡಲಪಾಳ್ಯದ ನಿವಾಸದಲ್ಲಿ ಲಕ್ಷ್ಮಣ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ಲಕ್ಷ್ಮಣ ಅವರು ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

 

Share Post

Leave a Reply

Your email address will not be published.