ಖ್ಯಾತ ಕಿರುತೆರೆ ನಟಿ ಅಪಘಾತಕ್ಕೆ ಬಲಿ; ಭಾವಿ ಪತಿ ಜೊತೆ ಇದ್ದಾಗಲೇ ದುರಂತ..!

ಶಿಮ್ಲಾ; ಖ್ಯಾತ ಕಿರುತೆರೆ ನಟಿಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಭಾವಿ ಪತಿ ಜೊತೆ ತೆರಳುತ್ತಿದ್ದಾಗಲೇ ದುರ್ಘಟನೆ ನಡೆದಿದೆ. ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಮಿಂಚುತ್ತಿದ್ದ ವೈಭವಿ ಉಪಾಧ್ಯಾಯ ಎಂಬುವವರೇ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ.

ವೈಭವಿ ಉಪಾಧ್ಯಾಯ ಅವರಿಗೆ ಇತ್ತೀಚೆಗೆ ಎಂಗೇಜ್‌ಮೆಂಟ್‌ ಆಗಿತ್ತು. ಭಾವಿ ಪತಿ ಜೊತೆ ಕಾರಿನಲ್ಲಿ ಶಿಮ್ಲಾ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ದುರಂತ ನಡೆದಿದೆ ಎಂದು ತಿಳಿದುಬಂದಿದೆ. ಕಾರು ಅತಿವೇಗವಾಗಿದ್ದರಿಂ ಪಲ್ಟಿಯಾಗಿದ್ದು, ವೈಭವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಂದು ವೈಭವಿ ಮೃತದೇಹವನ್ನು ಮುಂಬೈಗೆ ತಂದು ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

ವೈಭವಿ ಉಪಾಧ್ಯಾಯ ಅವರು, ಸಾರಾಭಾಯ್‌ vs ಸಾರಾಭಾಯ್‌ ಎಂಬ ಹಿಂದಿ ಧಾರಾವಾಹಿ ಮೂಲಕ ಸಖತ್‌ ಫೇಮಸ್‌ ಆಗಿದ್ದರು. ಅದರಲ್ಲದೆ ಹಲವು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಅವರು ಮನೆಮಾತಾಗಿದ್ದರು.

Share Post