ಚಿರಂಜೀವಿ ಪುತ್ರಿ ಶ್ರೀಜಾ ಮೂರನೇ ಮದುವೆಯಾಗಿಬಿಟ್ಟರಾ..?; ಯಾರು ಆ ಹೊಸ ವ್ಯಕ್ತಿ..?

ಹೈದರಾಬಾದ್‌; ಮೆಗಾಸ್ಟಾರ್‌ ಸ್ಟಾರ್‌ ಚಿರಂಜೀವಿ ಪುತ್ರಿ ಶ್ರೀಜಾ ಈಗಾಗಲೇ ಎರಡು ಮದುವೆ ಮಾಡಿಕೊಂಡು ಎರಡೂ ಸಂಬಂಧಗಳು ಮುರಿದುಬಿದ್ದಿರೋದು ಗೊತ್ತೇ ಇದೆ. ಇದೀಗ ಶ್ರೀಜಾ ಮೂರನೇ ಮದುವೆಗೆ ರೆಡಿಯಾಗಿದ್ದಾರಂತೆ. ಅವರೇ ಇನ್ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್‌ ಇಂತಹದ್ದೊಂದು ಅನುಮಾನ ಮೂಡಿಸಿದೆ.

ಹೊಸ ವರ್ಷಕ್ಕೆ ಶ್ರೀಜಾ ಪೋಸ್ಟ್‌ ಒಂದನ್ನು ಹಾಕಿದ್ದು, ಅದ್ರಲ್ಲಿ ಡಿಯರ್ 2022, ನೀನು ನನ್ನ ಜೀವನಕ್ಕೆ ಹೊಸ ವ್ಯಕ್ತಿಯನ್ನು ಪರಿಚಯ ಮಾಡಿಸಿದ್ದೀಯಾ. ಅವನ ಭೇಟಿ ನಿಜಕ್ಕೂ ಒಂದು ಅದ್ಭುತ ಪಯಣ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಶ್ರೀಜಾ ಮೂರನೇ ಮದುವೆಯನ್ನೂ ಸದ್ದಿಲ್ಲದೆ ಆಗಿಬಿಟ್ಟರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಚರ್ಚೆಗಳು ಕೂಡಾ ನಡೆಯುತ್ತಿವೆ.

ಚಿರಂಜೀವಿ ಹೊಸ ಪಕ್ಷ ಕಟ್ಟಿದ ಸಂದರ್ಭದಲ್ಲಿ ಶ್ರೀಜಾ ಮನೆಯವರನ್ನು ಎದುರಿಸಿ ವ್ಯಕ್ತಿಯೊಬ್ಬನನ್ನು ಪ್ರೀತಿಸಿ ವಿವಾಹವಾಗಿದ್ದರು. ಇದಾದ ಕೆಲ ದಿನಗಳಿಂದ ಶ್ರೀಜಾ ಆತನಿಂದ ದೂರವಾಗಿದ್ದರು. ಅನಂತರ ಕುಟುಂಬದವರೇ ೨೦೧೬ರಲ್ಲಿ ಉದ್ಯಮಿ ಕಲ್ಯಾಣ್‌ ದೇವ್‌ ಜೊತೆ ಮದುವೆ ಮಾಡಿಸಿದ್ದರು. ಆದ್ರೆ ಆ ಸಂಬಂಧವೂ ಮುರಿದುಬಿದ್ದಿತ್ತು. ಕೆಲ ತಿಂಗಳುಗಳಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು.

Share Post

Leave a Reply

Your email address will not be published.