ತೆಲುಗು ನಟ ಮಹೇಶ್‌ ಬಾಬು ಪುತ್ರಿಗೆ ಬಂಪರ್‌ ಆಫರ್‌

ಹೈದರಾಬಾದ್‌; ತೆಲುಗಿನಲ್ಲಿ ಮಹೇಶ್‌ ಬಾಬು ಖ್ಯಾತ ನಟ. ಅವರ ತಂದೆ ಸೂಪರ್‌ ಸ್ಟಾರ್‌ ಕೃಷ್ಣ ಕೂಡಾ ದೊಡ್ಡ ಹೆಸರುಗಳಿಸಿದ್ದರು. ಇದೀಗ ಮಹೇಶ್‌ ಬಾಬು ಅವರ ಪುತ್ರಿ ಕೂಡಾ ಸಾಕಷ್ಟು ಬೇಡಿಕೆ ಗಳಿಸಿಕೊಳ್ಳುತ್ತಿದ್ದಾಳೆ. ಮಹೇಶ್‌ ಬಾಬು ಪುತ್ರಿ ಸಿತಾರಾಗೆ ಜಾಹೀರಾತೊಂದರಲ್ಲಿ ನಟಿಸಲು ದೊಡ್ಡ ಆಫರ್‌ ಬಂದಿದೆ.

ಸಿತಾರಾ ಘಟ್ಟಮನೇನಿ ಚಿಕ್ಕ ವಯಸ್ಸಿಗೆ ಅತ್ಯಂತ ಬೇಡಿಕೆ ಗಳಿಸಿಕೊಂಡಿದ್ದಾಳೆ. ಇದುವರೆಗೂ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಯಾವುದೇ ನಟ-ನಟಿಯರ ಮಕ್ಕಳು ಪಡೆಯದಂತಹ ಸಂಭಾವನೆಯನ್ನು ಈ ಹೊಸ ಜಾಹೀರಾತಿಗೆ ಸಿತಾರಾ ಪಡೆದಿದ್ದಾಳೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಇದೊಂದು ಆಭರಣ ಜಾಹೀತಾಗಿದ್ದು, ಮೂರು ದಿನಗಳ ಕಾಲ ಇದರ ಚಿತ್ರೀಕರಣ ನಡೆದಿದೆ. ಈ ಜಾಹೀರಾತು ತಯಾರಿಸಲು ಚಿತ್ರರಂಗ ದೊಡ್ಡ ದೊಡ್ಡ ತಂತ್ರಜ್ಞರೆಲ್ಲಾ ಕೆಲಸ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Share Post