ಸಾಕ್ಷಾತ್ಕಾರ ನಟಿ ಜಮುನಾ ಇನ್ನಿಲ್ಲ; ಹೈದರಾಬಾದ್‌ ನಿವಾಸದಲ್ಲಿ ಕೊನೆಯುಸಿರು

ಹೈದರಾಬಾದ್‌; ಹಿರಿಯ ಬಹುಭಾಷಾ ನಟಿ ಜಮುನಾ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಹೈದರಾಬಾದ್‌ನ ನಿವಾಸದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಜಮುನಾ ನಿಧನಕ್ಕೆ ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಜಮುನಾ ಅವರಿಗೆ 86 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಜಮುನಾ ಅವರು ಕನ್ನಡದಲ್ಲೂ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದರು. ಅದರಲ್ಲೂ ಸಾಕ್ಷಾತ್ಕಾರ ಹಾಗೂ ಭೂಕೈಲಾಸ ಚಿತ್ರದಲ್ಲಿನ ಅವರ ನಟನೆಯನ್ನು ಕನ್ನಡಿಗರು ಎಂದಿಗೂ ಮರೆಯೋದಿಲ್ಲ.

1953ರಲ್ಲಿ ಪುಟ್ನಿಲ್ಲು ಎಂಭ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಜಮುನಾ ಎಂಟ್ರಿ ಕೊಟ್ಟರು. ತೆಲುಗು, ತಮಿಳು, ಹಿಂದಿ, ಕನ್ನಡ ಹೀಗೆ ನಾನಾ ಭಾಷೆಯ ಜಮುನಾ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ.ರಾಜ್ ಕುಮಾರ್ ಜೊತೆ ಭೂ ಕೈಲಾಸ ಮತ್ತು ಸಾಕ್ಷಾತ್ಕಾರ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.

Share Post