ನಟರಿಗೂ ಕಾಸ್ಟಿಂಗ್‌ ಕೌಚ್‌ ಅನುಭವ; ಶೋಷಣೆ ಕತೆ ಬಿಚ್ಚಿಟ್ಟ ರಣ್ವೀರ್‌ ಸಿಂಗ್‌

ಮುಂಬೈ; ಚಿತ್ರರಂಗದಲ್ಲಿ ಕಾಸ್ಟಿಂಗ್‌ ಕೌಚ್‌ ಬಗ್ಗೆ ಇತ್ತೀಚೆಗೆ ಹೆಚ್ಚು ಆರೋಪಗಳು ಕೇಳಿಬರುತ್ತಿವೆ. ಕೆಲ ವರ್ಷಗಳಿಂದ ನಾಯಕಿಯರು ಈ ಬಗ್ಗೆ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಆದ್ರೆ ನಟರಿಗೂ ಇದು ಹೊರತಾಗಿಲ್ಲ ಅನ್ನೋದು ಈಗ ಬಯಲಾಗಿದೆ. ನನಗೂ ಕೆಟ್ಟ ಅನುಭವ ಆಗಿದೆ ಎಂದು ದೀಪಿಕಾ ಪಡುಕೋಣೆ ಪತಿ ರಣ್ವೀರ್‌ ಸಿಂಗ್‌ ಹೇಳಿಕೊಂಡಿದ್ದಾರೆ.

ಮೊರಾಕೊದಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ರಣ್ವೀರ್ ಸಿಂಗ್ ಭಾಗಿಯಾಗಿದಾರೆ. ಇಲ್ಲಿ ಅವ್ರು ಈ ಕರಾಳ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ನಾನು ಚಿತ್ರೋದ್ಯಮಕ್ಕೆ ಕಾಲಿಡುವ ಸಂದರ್ಭದಲ್ಲಿ ಕೆಲ ದುಷ್ಟರು ಲೈಂಗಿಕ ಶೋಷಣೆ ಮಾಡಲು ಪ್ರಯತ್ನಿಸಿದ್ದರು ಎಂದು ಹೇಳಿ ಕುತೂಹಲಕ್ಕೆ ಕಾರಣರಾಗಿದ್ದಾರೆ. ನಿರ್ಮಾಪಕರೊಬ್ಬರು ನನ್ನೊಂದಿಗೆ ಕೆಟ್ಟದಾಗಿ ನಡೆಸಿಕೊಂಡರು. ಏನೇನೋ ಪ್ರಶ್ನೆಗಳನ್ನು ಕೇಳಿದರು. ಡಾರ್ಲಿಂಗ್, ಬಿ ಸೆಕ್ಸಿ ಅಂತೆಲ್ಲಾ ನನ್ನನ್ನು ಕರೆದರು. ಅವರು ಯಾಕೆ ಹಾಗೆ ಕರೆಯುತ್ತಿದ್ದಾರೆ ಅನ್ನೋದು ನನಗೆ ಗೊತ್ತಾಗೋಕೆ ತುಂಬಾ ಸಮಯ ಬೇಕಾಗ್ಲಿಲ್ಲ ಎಂದು ರಣ್ವೀರ್‌ ಹೇಳಿಕೊಂಡಿದ್ದಾರೆ.

Share Post