ಜೂ.ಎನ್‌ಟಿಆರ್‌ ಕಟೌಟ್‌ಗೆ ರಕ್ತಾಭಿಷೇಕ; ಕೆಜಿಎಫ್‌ ಯುವಕರು ಜೈಲು ಪಾಲಾಗಿದ್ದೇಕೆ..?

ಬೆಂಗಳೂರು; ಮೇ 20 ರಂದು ತೆಲುಗಿನ ಸ್ಟಾರ್‌ ನಟ ಜ್ಯೂನಿಯರ್‌ ಎನ್‌ಟಿಆರ್‌ ತಮ್ಮ 40ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಕರ್ನಾಟಕದ ಗಡಿ ಪ್ರದೇಶದಲ್ಲೂ ಅವರ ಅಭಿಮಾನಿಗಳು ಸಾಕಷ್ಟು ಜನ ಇದ್ದಾರೆ. ಹೀಗಾಗಿ, ಗಡಿ ಭಾಗಗಳಲ್ಲಿ ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳು ಹುಟ್ಟುಹಬ್ಬ ಆಚರಣೆ ಮಾಡಿದ್ದರು. ಕೆಜಿಎಫ್‌ನಲ್ಲಿ ಹೀಗೆ ಎನ್‌ಟಿಆರ್‌ ಹುಟ್ಟುಹಬ್ಬ ಆಚರಿಸಿದ್ದ ಅಭಿಮಾನಿಗಳು ಈಗ ಜೈಲು ಪಾಲಾಗಿದ್ದಾರೆ.

ಕೆಜಿಎಫ್‌ನ ರಾಬರ್ಟ್‌ಸನ್‌ ಪೇಟೆಯಲ್ಲಿ ಜೂನಿಯರ್‌ ಎನ್ಟಿಆರ್‌ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದ್ದರು. ಈ ವೇಳೆ ಎರಡು ಮೇಕೆಗಳನ್ನು ಕತ್ತರಿಸಿದ್ದರು. ಅದರ ರಕ್ತದಿಂದ ಜೂನಿಯರ್‌ ಎನ್‌ಟಿಆರ್‌ ಪೋಸ್ಟರ್‌ಗೆ ಅಭಿಷೇಕ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ.

ನಾಗಭೂಷಣಂ, ಶಿವನಾಗ ರಾಜು, ಅನಿಲ್ ಕುಮಾರ್, ಶಿವ, ನಾಗೇಶ್ವರ ರಾವ್ ಸೇರಿದಂತೆ 9 ಬಂಧಿತರು ಎಂದು ತಿಳಿದುಬಂದಿದೆ.

Share Post