ಯಮನಂತೆ ಬಂತು ಟ್ರಕ್‌; ರಸ್ತೆ ವಿಭಜಕದಲ್ಲಿ ಮಲಗಿದ್ದ ನಾಲ್ವರ ದುರ್ಮರಣ

ನವದೆಹಲಿ; ಇರಲು ಸೂರಿಲ್ಲದೆ ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ಟ್ರಕ್‌ ಹರಿದು, ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದೆಹಲಿಯ ಸೀಮಾಪುರಿಯಲ್ಲಿ ನಡೆದಿದೆ. ಟ್ರಕ್‌ ಸೀಮಾಪುರಿ ಡಿಪೋ ದಾಟುವಾಗ ರಸ್ತೆ ವಿಭಜಕದ ಮೇಲೆ ಹತ್ತಿ ಈ ದುರ್ಘಟನೆ ನಡೆದಿದೆ.

ರಸ್ತೆ ವಿಭಜಕದಲ್ಲಿ ಮಲಗಿದ್ದ ಆರು ಮಂದಿಯ ಮೇಲೆ ಟ್ರಕ್‌ ಹರಿದಿದೆ. ಇದರಿಂದಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಕೊನೆಯುಸಿರೆಳೆದಿದ್ದಾನೆ. ಘಟನೆಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಕರೀಂ(52), ಚೊಟ್ಟೆ ಖಾನ್ (25), ಶಾ ಆಲಂ(38) ಮತ್ತು ರಾಹುಲ್(45) ಎಂದು ಗುರುತಿಸಲಾಗಿದೆ. ಮನೀಶ್(16) ಮತ್ತು ಪ್ರದೀಪ್(30) ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Share Post

Leave a Reply

Your email address will not be published.