ಆರ್‌ಆರ್‌ಆರ್‌ ತಂಡಕ್ಕೆ ಗೋಲ್ಡರ್‌ ಗ್ಲೋಬ್‌ ಪ್ರಶಸ್ತಿ; ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ; ಗೋಲ್ಡನ್ ಗ್ಲೋಬ್ಸ್ ‍ಪ್ರಶಸ್ತಿಗೆ ಭಾಜನವಾಗಿರುವ ಆರ್.ಆರ್.ಆರ್ ಚಿತ್ರತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದು, ಕೀರವಾಣಿ ಅವರು ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಗೌರವ ಪ್ರತಿಯೊಬ್ಬ ಭಾರತೀಯ ಪ್ರಜೆ ಹೆಮ್ಮೆಪಡುವಂತ ವಿಚಾರ. ರಾಜಮೌಳಿ, ಕೀರವಾಣಿ, ರಾಮ್ ಚರಣ್, ಜ್ಯೂನಿಯರ್ ಎನ್.ಟಿ.ಆರ್ ಹಾಗೂ ಇಡೀ ಆರ್‌ಆರ್‌ಆರ್‌ ತಂಡಕ್ಕೆ ಅಭಿನಂದನೆಗಳು ಎಂದು ಮೋದಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯ ಬೆಸ್ಟ್ ಒರಿಜನಲ್ ಸಾಂಗ್ ಕೆಟಗರಿಯಲ್ಲಿ ‘ನಾಟು ನಾಟು’ ಹಾಡಿಗೆ ಈ ಪ್ರಶಸ್ತಿ ಬಂದಿದೆ. ಯುನೈಟೆಡ್ ಸ್ಟೇಟ್ಸ್ ನ ಬೆವೆರ್ಲಿ ಹಿಲ್ಸ್ ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಮಾರಂಭದಲ್ಲಿ ರಾಜಮೌಳಿ, ಜ್ಯೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ಕುಟುಂಬ ಕೂಡ ಭಾಗಿಯಾಗಿತ್ತು.

Share Post

Leave a Reply

Your email address will not be published.