ವರಾಹ ರೂಪಂ ಹಾಡು ಬಳಕೆಗೆ ಅನುಮತಿ ನೀಡಿದ ಕೋರ್ಟ್‌

ಕೋಝೀಕ್ಕೋಡ್;‌ ಕಾಂತಾರಾ ಸಿನಿಮಾದಲ್ಲಿ ವರಾಹ ರೂಪಂ ಹಾಡಿಗೆ ಬಳಸಲಾಗಿರುವ ಟ್ಯೂನ್‌ ವಿವಾದ ಸಂಬಂಧ ಈ ಚಿತ್ರತಂಡಕ್ಕೆ ರಿಲೀಫ್‌ ಸಿಕ್ಕಿದೆ. ಕಾಂರಾತಾ ಸಿನಿಮಾದ ಈ ಹಾಡನ್ನು ಇನ್ನು ಮುಂದೆ ಕೇಳಬಹುದು ಎಂದು ಕೋಝಿಕ್ಕೋಡ್‌ ಕೊರ್ಟ್‌ ಹೇಳಿದೆ. ಈ ಹಾಡಿನ ಬಳಕೆಗೆ ತಡೆ ನೀಡಿದ್ದ ಕೋರ್ಟ್‌ ಇಂದು ಅದನ್ನು ರದ್ದು ಮಾಡಿದೆ.

ಬಗ್ಗೆ ಈ ಹಾಡಿನ ಬರಹಗಾರ ಶಶಿಧರ್ ಕಾವೂರು ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ತೈಕ್ಕುಡಂ ಬ್ರಿಡ್ಜ್​​’ ಬ್ಯಾಂಡ್​ನ ‘ನವರಸಂ..’ ಹಾಡಿನ ಟ್ಯೂನ್ ಅನ್ನು ಕದಿಯಲಾಗಿದೆ ಎಂದು ಬ್ಯಾಂಡ್‌ನ ತಂಡ ಕೋರ್ಟ್‌ ಮೊರೆಹೋಗಿತ್ತು. ಈ ಕಾರಣಕ್ಕಾಗಿ ಕೋರ್ಟ್‌ ಮೊದಲು ಹಾಡಿಗೆ ತಡೆ ನೀಡಿತ್ತು.

ಇದೀಗ ಚಿತ್ರತಂಡದ ಪರ ವಕೀಲರು ನಾನು ಈ ಹಾಡು ಕದ್ದಿಲ್ಲ. ರಾಗಗಳು ಒಂದೇ ಇರುವ ಕಾರಣ ಸಾಮ್ಯತೆ ಇದೆ. ಸಹಜ ಸ್ಪೂರ್ತಿ ಪಡೆದಿದ್ದೇವೆ ಅಷ್ಟೇ ಎಂದು ವಾದಿಸಿದ್ದರು. ಇದನ್ನು ಪರಿಗಣಿಸಿರುವ ಕೋರ್ಟ್‌, ಹಾಡು ಬಳಕೆಗೆ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.

 

Share Post

Leave a Reply

Your email address will not be published.