ಮೆಗಾಸ್ಟಾರ್‌ ಚಿರಂಜೀವಿ ಹುಟ್ಟುಹಬ್ಬದ ಸಂಭ್ರಮ; ಗಣ್ಯರಿಂದ ಶುಭ ಹಾರೈಕೆ

ಹೈದರಾಬಾದ್‌; ಟಾಲಿವುಡ್‌ ಮೆಗಾಸ್ಟಾರ್‌ ಚಿರಂಜೀವಿ ಅವರು ಇಂದು 67ನೇ ವರ್ಷದ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು. ತಮ್ಮ ನಿವಾಸದಲ್ಲಿ ಪುತ್ರ ರಾಮ್‌ಚರಣ್‌, ಪುತ್ರಿ ಹಾಗೂ ಪತ್ನಿಯ ಸಮ್ಮುಖದಲ್ಲಿ ಸರಳವಾಗಿ ಕೇಕ್ ಕಟ್‌ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು.

ತೆಲುಗು ಚಿತ್ರರಂಗದ ಗಣ್ಯರು ಸೇರಿದಂತೆ ದಕ್ಷಿಣ ಭಾರತದ ನಟ ನಟಿಯರು ಹಾಗೂ ಬಾಲಿವುಡ್‌ ತಾರೆಯರು ಚಿರುಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಚಿರು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದಾರೆ. ಚಿರು ಈ ವರ್ಷ ಮೂರು ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಾಲ್ಟರ್‌ ವೀರಯ್ಯ, ಭೋಳ ಶಂಕರ್‌ ಹಾಗೂ ಗಾಡ್‌ಫಾದರ್ ಸಿನಿಮಾಗಳಲ್ಲಿ ಚಿರು ನಾಯಕರಾಗಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಗಾಡ್‌ಫಾದರ್‌ ಸಿನಿಮಾದ ಟೀಸರ್‌ ಬಿಡುಗಡೆ ಮಾಡಲಾಗಿದೆ.

ಈ ಟೀಸರ್‌ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 70 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಇದು ಮಲಯಾಳಂನ ‘ಲೂಸಿಫರ್’ ಚಿತ್ರದ ರಿಮೇಕ್. ಈ ಸಿನಿಮಾ ಮೇಲೆ ಚಿರಂಜೀವಿ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Share Post

Leave a Reply

Your email address will not be published.