ದುಬಾರಿ ಮನೆ ಖರೀದಿಸಿದ ನಟಿ ಜ್ಯೋತಿಕಾ; ಬರೋಬ್ಬರಿ 70 ಕೋಟಿ..!

ಮುಂಬೈ; ಖ್ಯಾತ ನಟ ಸೂರ್ಯ ಹಾಗೂ ಜ್ಯೋತಿಕಾ ದಂಪತಿ ದುಬಾರಿ ಮನೆ ಖರೀದಿಸಿ ಸುದ್ದಿಯಾಗಿದ್ದಾರೆ. ಮುಂಬೈನ ಐಶಾರಾಮಿ ಅಪಾರ್ಟ್‌ಮೆಂಟ್‌ ಒಂದರಲ್ಲಿ ಅವರು 70 ಕೋಟಿ ರೂಪಾಯಿ ಕೊಟ್ಟು ಫ್ಲಾಟ್‌ ಖರೀದಿ ಮಾಡಿದ್ದಾರೆ.

ಪಾರ್ಕಿಂಗ್, ಜಿಮ್, ಥಿಯೇಟರ್, ಸ್ವಿಮ್ಮಿಂಗ್ ಫೂಲ್, ಗಾರ್ಡನ್ ಏರಿಯಾ ಸೇರಿ ಎಲ್ಲಾ ಸೌಕರ್ಯ ಈ ಫ್ಲ್ಯಾಟ್‌ನಲ್ಲಿದೆ ಎಂದು ತಿಳಿದುಬಂದಿದೆ. ಈ ಫ್ಲ್ಯಾಟ್‌ ಒಟ್ಟು ಒಂಬತ್ತು ಸಾವಿರ ಚದರ ಅಡಿ ವಿಸ್ತೀರ್ಣವಿದೆ ಎಂದು ತಿಳಿದುಬಂದಿದೆ. ಸದ್ಯ ಚೆನ್ನೈನಲ್ಲಿ ವಾಸವಿರುವ ಈ ದಂಪತಿ ಶೀಘ್ರದಲ್ಲೇ ಮುಂಬೈಗೆ ಶಿಫ್ಟ್‌ ಆಗಲಿದ್ದಾರೆ ಎಂದು ತಿಳಿದುಬಂದಿದೆ.

Share Post