ಕ್ರಿಸ್‌ ಗೇಲ್‌ ಜೊತೆ ಕಾಣಿಸಿಕೊಂಡ ನಟಿ ದೀಪಿಕಾ ದಾಸ್‌

ದುಬೈ; ಬಿಗ್‌ಬಾಸ್‌ ಸ್ಪರ್ಧಿ ಹಾಗೂ ನಟಿ ದೀಪಿಕಾ ದಾಸ್‌ ದುಬೈ ಪ್ರವಾಸದಲ್ಲಿದ್ದು, ಈ ವೇಳೆ ಕ್ರಿಕೆಟಿಗ ಕ್ರಿಸ್‌ ಗೇಲ್‌ ಅವರನ್ನು ಭೇಟಿ ಮಾಡಿದ್ದಾರೆ. ಅದರ ಫೋಟೋಗಳು ಎಲ್ಲೆಡೆ ವೈರಲ್‌ ಆಗುತ್ತಿವೆ. ದೀಪಿಕಾ ದಾಸ್‌ ಅವರು ಕ್ರಿಸ್‌ ಗೇಲ್‌ ಅವರ ಅಭಿಮಾನಿಯಂತೆ. ಹೀಗಾಗಿ ಪ್ರವಾಸದ ಮೇಲೆ ಕ್ರಿಸ್‌ ಗೇಲ್‌ ಸಿಕ್ಕಿದ್ದು, ಅವರೊಂದಿಗೆ ಮಾತನಾಡಿಸಿದ್ದಾರೆ. ಫೋಟೋ ತೆಗೆಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಾಗಿಣಿ ಸೀರಿಯಲ್‌ ಹಾಗೂ ಬಿಗ್‌ ಬಾಸ್‌ ಮೂಲಕ ಹೆಸರು ಮಾಡಿರುವ ದೀಪಿಕಾ ದಾಸ್‌, ಸದ್ಯ ದುಬೈನಲ್ಲಿ ಫ್ರೆಂಡ್ಸ್‌ ಜೊತೆ ಎಂಜಾಯ್‌ ಮಾಡುತ್ತಿದ್ದಾರೆ. ಶೂಟಿಂಗ್‌ಗೆ ಬ್ರೇಕ್‌ ಹಾಕಿ ಮೋಜು-ಮಸ್ತಿ ಮಾಡುತ್ತಿದ್ದಾರೆ.

Share Post