3ನೇ ಸ್ಥಾನದಿಂದ 38ನೇ ಸ್ಥಾನಕ್ಕೆ ಕುಸಿದ ಗೌತಮ್‌ ಅದಾನಿ

ನವದೆಹಲಿ; ಅದಾನಿ ಸಾಮ್ರಾಜ್ಯ ಪತನದತ್ತ ಸಾಗಿದೆ. ಹಿಂಡೆನ್‌ಬರ್ಗ್ ವರದಿ ಬಳಿಕ ಗೌತಮ್‌ ಅದಾನಿಗೆ ಹಿನ್ನಡೆ ಮೇಲೆ ಹಿನ್ನಡೆ ಆಗುತ್ತಿದೆ. ಇದೀಗ ಫೋರ್ಬ್ಸ್ ಶ್ರೀಮಂತರ ಪಟ್ಟಿ ಪ್ರಕಟವಾಗಿದೆ. ಅದರಲ್ಲಿ ಗೌತಮ್‌ ಅದಾನಿ 3ನೇ ಸ್ಥಾನದಿಂದ 38ನೇ ಸ್ಥಾನಕ್ಕೆ ಕುಸಿದಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಕಂಪನಿಗಳ ನಿರಂತರವಾಗಿ ಕುಸಿಯುತ್ತಿವೆ. ಈ ಕಾರಣದಿಂದಾಗಿ ಅದಾನಿ ಕಂಪನಿಗಳಿಗೆ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದೆ.

2023ರ ಜನವರಿ 24 ರಂದು ಹಿಂಡೆನ್‌ಬರ್ಗ್ ಅದಾನಿ ಕಂನಿ ಬಗ್ಗೆ ವರದಿ ಪ್ರಕಟಿಸಿತ್ತು. ಇದಕ್ಕಿಂತ ಮೊದಲು ಗೌತಮ್ ಅದಾನಿ ಒಟ್ಟು ಆಸ್ತಿ ಮೌಲ್ಯ 119 ಶತಕೋಟಿ ಡಾಲರ್ ಇತ್ತು. ಆದ್ರೆ ಅದಾದ ಮೇಲೆ 85 ಶತಕೋಟಿ ಡಾಲರ್‌ನಷ್ಟು ಕುಸಿತ ಕಂಡಿದೆ. ಇದರ ನಡುವೆಯೂ ಬ್ಲೂಮ್ ಬರ್ಗ್ ಬಿಲಿನೆಯರ್ಸ್ ಸೂಚ್ಯಂಕ ಪಟ್ಟಿಯಲ್ಲಿ ಗೌತಮ್ ಅದಾನಿ 30ನೇ ಸ್ಥಾನದಲ್ಲಿದ್ದಾರೆ.

Share Post