ಯುವನಿಧಿ ಕೊಡುತ್ತಿರುವುದಕ್ಕೆ ಥ್ಯಾಂಕ್ಯೂ ರಾಹುಲ್‌; ಸ್ಟೇಡಿಯಂ ರಾರಾಜಿಸಿ ಪೋಸ್ಟರ್‌ಗಳು

ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹಲವು ಯೋಜನೆಗಳನ್ನು ಜಾರಿಗೆ ತರೋದಾಗಿ ಕಾಂಗ್ರೆಸ್‌ ನಾಯಕರು ಗ್ಯಾರೆಂಟಿ ಕಾರ್ಡ್‌ ನೀಡುತ್ತಿದ್ದಾರೆ. ಅದರಲ್ಲಿ ಯುವ ನಿಧಿ ಯೋಜನೆ ಕೂಡಾ ಒಂದು.

ಯುವನಿಧಿ ಯೋಜನೆ ಮೂಲಕ ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷದ ಕಾಲ ಪ್ರತಿ ತಿಂಗಳೂ ಮೂರು ಸಾವಿರ ರೂಪಾಯಿ ಹಾಗೂ ಡಿಪ್ಲೋಮಾ ಪಡೆದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಒಂದೂವರೆ ಸಾವಿರ ರೂಪಾಯಿ ನೀಡೋದಾಗಿ ಕಾಂಗ್ರೆಸ್‌ ಭರವಸೆ ನೀಡುತ್ತಿದೆ. ಇದಕ್ಕೆ ಯುವ ಸಮುದಾಯ ಫಿದಾ ಆದಂತೆ ಕಾಣುತ್ತಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್‌ ಪಂದ್ಯಾವಳಿ ವೇಳೆ ಯುವಕ, ಯುವತಿಯರು ಯುವನಿಧಿ ಯೋಜನೆಯನ್ನು ಬೆಂಬಲಿಸಿ ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದಾರೆ. ಯುವನಿಧಿ ಯೋಜನೆ ಕೊಡುತ್ತಿರುವುದಕ್ಕೆ ರಾಹುಲ್‌ ಗಾಂಧಿಯವರಿಗೆ ಧನ್ಯವಾದ ಎಂದು ಆ ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ. ಈ ವಿಡಿಯೋ ಈಗ ಎಲ್ಲಡೆ ವೈರಲ್‌ ಆಗುತ್ತಿದೆ.

ಇದೇ ವೇಳೆ ರಾಹುಲ್‌ ರಾಹುಲ್‌ ಎಂಬ ಘೊಷಣೆಗಳು ಕೂಡಾ ಮೊಳಗಿವೆ.

Share Post