ಸ್ಪೈಸ್‌ ಜೆಟ್‌ ವಿಮಾನ ಸೇವೆಯಲ್ಲಿ ವ್ಯತ್ಯಯ; ವೈರಸ್‌ ದಾಳಿ ಸಾಧ್ಯತೆ ಬಗ್ಗೆ ಶಂಕೆ

ಬೆಂಗಳೂರು; ಇಂದು ಬೆಳಗ್ಗೆಯಿಂದ ಸ್ಪೈಸ್‌ಜೆಟ್ ವಿಮಾನಗಳ ಸೇವೆಯಲ್ಲಿ ಭಾರಿ ವ್ಯತ್ಯಯ ಕಂಡುಬಂದಿದೆ. ಇದಕ್ಕೆ ಕಾರಣ ವೈರಸ್ ದಾಳಿಯ ಯತ್ನವಾಗಿರಬಹುದು ಎಂದು ಸ್ಪೈಸ್‌ ಜೆಟ್‌ ಸಂಸ್ಥೆ ಅನುಮಾನಪಟ್ಟಿದೆ.

ವಿಮಾನ ಸೇವೆಯಲ್ಲಿ ವ್ಯತ್ಯಯವಾಗಿ ತೊಂದರೆಗೆ ಸಿಲುಕಿರುವ ಬಗ್ಗೆ ಪ್ರಯಾಣಿಕರು ಟ್ವೀಟ್ ಮಾಡಿ, ಸ್ಪೈಸ್‌ಜೆಟ್ ಸಂಸ್ಥೆಯ ಸ್ಪಷ್ಟನೆ ಕೇಳಿದ್ದರು. ಪ್ರಯಾಣಿಕರು ಟ್ವೀಟ್ ಮಾಡಿ ಸಮಸ್ಯೆಯಾಗಿರುವ ಬಗ್ಗೆ ವಿವರಿಸುತ್ತಲೇ ಎಚ್ಚೆತ್ತುಕೊಂಡ ಸ್ಪೈಸ್‌ಜೆಟ್, ಇದೊಂದು ವೈರಸ್ ದಾಳಿಯ ಯತ್ನವಾಗಿರಬಹುದು. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈಗ ವಿಮಾನಯಾನ ಸೇವೆಯಲ್ಲಿ ಯಾವುದೇ ಸಮಸ್ಯೆಯಿಲ್ಲ, ಎಲ್ಲವೂ ಸರಿಯಾಗಿದೆ ಎಂದು ಉತ್ತರಿಸಿದೆ. ಆದರೆ, ಸ್ಪೈಸ್‌ಜೆಟ್ ಹೇಳಿಕೆ ಹೊರತಾಗಿಯೂ, ಬಹಳಷ್ಟು ಪ್ರಯಾಣಿಕರು ವಿಮಾನ ಸೇವೆ ಲಭ್ಯವಾಗುತ್ತಿಲ್ಲ. ಬೋರ್ಡಿಂಗ್ ಟಿಕೆಟ್ ಸಮಸ್ಯೆಯಾಗಿದೆ ಎಂದು ಟ್ವಿಟರ್‌ನಲ್ಲಿ ದೂರಿದ್ದಾರೆ.

Share Post

Leave a Reply

Your email address will not be published.