ಪ್ರಮಾಣವಚನ ಸಮಾರಂಭದಲ್ಲಿ ಕಾಲು ಉಳುಕಿಸಿಕೊಂಡ ಶಿವಣ್ಣ

ಬೆಂಗಳೂರು; ಸಿಎಂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರು ಪತ್ನಿ ಸಮೇತ ಪಾಲ್ಗೊಂಡಿದ್ದರು. ಇದೇ ವೇಳೆ ಅವರು ಕಾರ್ಯಕ್ರಮ ಮುಗಿಸಿ ತೆರಳುವಾಗ ಕಾಲು ಉಳುಕಿಸಿಕೊಂಡಿದ್ದಾರೆ.

ಕಾರ್ಯಕ್ರಮ ಮುಗಿದ ನಂತರ ಶಿವರಾಜ್‌ ಕುಮಾರ್‌ ಅವರು ಮೆಟ್ಟಿಲು ಇಳಿಯುತ್ತಿದ್ದರು. ಈ ವೇಳೆ ಅವರ ಕಾಲು ಜಾರಿದ್ದು, ಉಳುಕಿದೆ. ಆಗ ಗೀತಾ ಶಿವರಾಜ್‌ ನೆರವಿಗೆ ಬಂದಿದ್ದಾರೆ. ಪತ್ನಿಯ ಸಹಾಯದಿಂದ ಅವರು ಕಾರು ಹತ್ತಿ ಮನೆಗೆ ಹೋಗಿದ್ದಾರೆ.

Share Post