ನಾಳೆಯಿಂದ ಶ್ರೀರಾಮಪುರದಲ್ಲಿ ಗುಂಡೂರಾವ್‌ ಕಪ್‌ ಫುಟ್ಬಾಲ್‌ ಪಂದ್ಯಾವಳಿ

ಬೆಂಗಳೂರು; ಮಾಜಿ ಸಿಎಂ ದಿವಂಗತ ಗುಂಡೂರಾವ್‌ ಫೌಂಡೇಷನ್‌ ವತಿಯಿಂದ ನಾಲ್ಕನೇ ವರ್ಷದ ಆರ್‌.ಗುಂಡೂರಾವ್‌ ಕಪ್‌ ಫುಟ್ಬಾಲ್‌ ಟೂರ್ನಿಯನ್ನು ಆಯೋಜಿಸಲಾಗಿದೆ. ಶ್ರೀರಾಮಪುರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜನವರಿ 6 ರಿಂದ 8ರವರೆಗೆ ಈ ಪಂದ್ಯಾವಳಿ ನಡೆಯಲಿದೆ. ಎಲ್ಲಾ ಪಂದ್ಯಗಳೂ ಹೊನಲು ಬೆಳಕಿನಲ್ಲಿ ನಡೆಯಲಿವೆ ಎಂದು ಆಯೋಜಕರಾದ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಪಂದ್ಯಾವಳಿಯಲ್ಲಿ‌ ನಗರದ 16 ತಂಡಗಳು ಭಾಗಿಯಾಗಲಿವೆ. ವಿಜೇತ ತಂಡಕ್ಕೆ `ಆರ್.ಗುಂಡೂರಾವ್ ಫೌಂಡೇಶನ್’ ವತಿಯಿಂದ ಪ್ರಥಮ ಬಹುಮಾನದ ರೂಪದಲ್ಲಿ 1,11,111 ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತಿದೆ. ದ್ವೀತಿಯ ಸ್ಥಾನ ಪಡೆದ ತಂಡಕ್ಕೆ 55,555 ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತದೆ. ಉತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ವೈಯುಕ್ತಿಕ ಬಹುಮಾನಗಳೂ ಇವೆ ಎಂದು ಆಯೋಜಕರು ಹೇಳಿದ್ದಾರೆ.

ಪಂದ್ಯಾವಳಿ ಅತ್ಯಂತ ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗಿದ್ದು, ಎಲ್ಲಾ ಸೌಕರ್ಯಗಳನ್ನು ನಮ್ಮ ಆರ್.ಗುಂಡೂರಾವ್ ಫೌಂಡೇಶನ್ ಒದಗಿಸಲಿದೆ. ತುರ್ತು ಸೇವೆಗಾಗಿ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಕೂಡ ಮಾಡಲಾಗಿದೆ.

 

Share Post

Leave a Reply

Your email address will not be published.