ಖಾಸಗಿ ಬಸ್‌ ಡಿಕ್ಕಿ; ಯಶವಂತಪುರದಲ್ಲಿ ಮಹಿಳೆ ಸಾವು

ಬೆಂಗಳೂರು; ಖಾಸಗಿ ಬಸ್‌ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಯಶವಂತಪುರದ ಸತ್ವ ಅಪಾರ್ಟ್‌ಮೆಂಟ್‌ ಮುಂಭಾಗದ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ.

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಖಾಸಗಿ ಬಸ್‌ ಮಹಿಳೆ ಮೇಲೆ ಹರಿದಿದೆ. ತಲೆಯ ಮೇಲೆ ಚಕ್ರ ಹರಿದ ಪರಿಣಾಮ ವಿನುತ ಎಂಬ 32 ವರ್ಷದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ವಿನುತಾ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

Share Post

Leave a Reply

Your email address will not be published.