ಹಿಂದುತ್ವದ ವಿರುದ್ಧ ಪೋಸ್ಟ್‌; ನಟ ಚೇತನ್‌ ಅಹಿಂಸಾ ಅರೆಸ್ಟ್‌

ಬೆಂಗಳೂರು; ಹಿಂದುತ್ವದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್‌ ಹಾಕಿದ್ದ ಆರೋಪದ ಮೇಲೆ ನಟ ಚೇತನ್‌ ಅಹಿಂಸಾ ಅವರನ್ನು ಬಂಧಿಸಲಾಗಿದೆ. ಹಿಂದೂ ಸಂಘಟನೆ ಕಾರ್ಯಕರ್ತರೊಬ್ಬರು ನೀಡಿದ ದೂರದ ಆಧಾರದ ಮೇಲೆ ಕೇಸ್‌ ದಾಖಲಿಸಿಕೊಳ್ಳಲಾಗಿದ್ದು, ಶೇಷಾದ್ರಿಪುರಂ ಪೊಲೀಸರು ಚೇತನ್‌ರನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದ ನಟ ಚೇತನ್‌ ಅವರು, ಹಿಂದುತ್ವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎಂದು ಬರೆದುಕೊಂಡಿದ್ದರು. ಜೊತೆಗೆ ರಾಮಜನ್ಮಭೂಮಿ, ಉರಿಗೌಡ ಹಾಗೂ ನಂಜೇಗೌಡರ ಬಗ್ಗೆಯೂ ಬರೆಯಲಾಗಿತ್ತು. ಇದರಿಂದಾಗಿ ಹಿಂದೂಗಳ ಮನಸ್ಸನ್ನು ನೋಯಿಸಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಎಫ್‌ಐಆರ್‌ ದಾಖಲಿಸಿಕೊಂಡಿರುವ ಶೇಷಾದ್ರಿಪುರಂ ಪೊಲೀಸರು, ಚೇತನ್‌ರನ್ನು ಬಂಧಿಸಿ, ಎಂಟನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

Share Post