ನಂದಿನಿ ಹಾಲು, ಮೊಸರಿನ ದರ 2 ರೂಪಾಯಿ ಏರಿಕೆ; ನಾಳೆಯಿಂದಲೇ ಜಾರಿ

ಬೆಂಗಳೂರು; ನಂದಿನಿ ಹಾಲು, ಮೊಸರಿಗೆ ಲೀಟರ್‌ಗೆ ಎರಡು ರೂಪಾಯಿಗೆ ಏರಿಕೆ ಮಾಡಲಾಗಿದೆ. ನಾಳೆಯಿಂದಲೇ ಹೊಸ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್‌ ತಿಳಿಸಿದೆ. ಇಂದು ನಡೆದ ಸಭೆ ಬಳಿಕ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಈ ವಿಷಯ ತಿಳಿಸಿದ್ದಾರೆ.

ಏರಿಕೆ ಮಾಡುವ ದರವನ್ನು ನೇರವಾಗಿ ರೈತರಿಗೆ ನೀಡಲಿದ್ದೇವೆ ಎಂದು ಕೆಎಂಎಫ್‌ ಅಧ್ಯಕ್ಷರು ತಿಳಿಸಿದ್ದಾರೆ. ಮಳೆ ಹಚ್ಚಾಗಿದ್ದರಿಂದ ರೋಗ ಬಂದು ದನಗಳು ಸಾಯುತ್ತಿವೆ. ಹೀಗಾಗಿ ರೈತರಿಗೆ ಆಗುತ್ತಿರುವ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಈ ಏರಿಕೆ ಮಾಡಲಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ  ನೇತೃತ್ವದ ಸಭೆಯಲ್ಲಿ ಬೆಲೆ ಏರಿಕೆ ವಿಚಾರ ಚರ್ಚೆಗೆ ಬಂದಿತ್ತು. ಇತ್ತೀಚೆಗಷ್ಟೇ ಬೆಲೆ ಏರಿಕೆಯನ್ನು ತಡೆಹಿಡಿದಿದ್ದ ಸಿಎಂ, ಎರಡು ರೂಪಾಯಿ ಏರಿಕೆಗೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

 

Share Post