ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಮೀ ಟೂ ಸದ್ದು; ನಟಿ ಆಶಿತಾ ಹೇಳಿದ್ದೇನು..?

ಬೆಂಗಳೂರು; ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಮೀ ಟೂ ಸದ್ದು ಕೇಳಿಬಂದಿದೆ. ಎರಡು ವರ್ಷಗಳ ಹಿಂದೆ ನಟಿ ಶ್ರುತಿ ಹರಿಹರನ್‌ ಮೀಟೂ ಆರೋಪ ಮಾಡಿ ಕೋರ್ಟ್‌ ಮೇಟ್ಟಿಲೇರಿದ್ದರು. ಇದೀಗ ಆಕಾಶ್‌, ರೋಡ್‌ ರೋಮಿಯೋ, ಬಾ ಬಾರೋ ರಸಿಕ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದ ಆಶಿತಾ ಕೂಡಾ ಇದೇ ರೀತಿಯ ಆರೋಪ ಮಾಡಿದ್ದಾರೆ. ಈಗ ಚಿತ್ರರಂಗದಿಂದ ದೂರವಿರುವ ಅವರು, ಚಿತ್ರೀಕರಣದ ವೇಳೆ ತಮಗಾದ ಅನುಭವಗಳನ್ನು ಖಾಸಗಿ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

ಸಿನಿಮಾಗಳಲ್ಲಿ ಅವಕಾಶ ಸಿಗಬೇಕೆಂದರೆ ಸಲುಗೆಯಿಂದ ಇರಬೇಕು, ನಾವು ಹೇಳಿದಂತೆ ಕೇಳಬೇಕು ಎಂದು ಹೇಳುತ್ತಿದ್ದರು. ಇವು ಹೇಸಿಗೆ ತರಿಸಿದ ಕಾರಣದಿಂದಾಗಿ ಚಿತ್ರರಂಗವನ್ನೇ ತೊರೆಯಬೇಕಾಯಿತು ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ನಾಚಿಕೆ ಇಲ್ಲದೇ ನೇರವಾಗಿಯೇ ಕೇಳಿದ ನಿರ್ದೇಶಕನ ಅಸಹ್ಯ ಪ್ರವೃತ್ತಿಯನ್ನು ಅವರು ತೆರೆದಿಟ್ಟಿದ್ದಾರೆ.

ಸಿನಿಮಾ ರಂಗದಿಂದ ದೂರವಾಗಿದ್ದಕ್ಕೆ ನನಗೇನೂ ಬೇಸರವಿಲ್ಲ. ಆದರೆ, ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಮೇಲೂ ನನಗೆ ಕೆಟ್ಟ ಅನುಭವಗಳು ಆದವು. ಆದರೆ, ನಾನು ಅದಕ್ಕೆ ಆಸ್ಪದ ಕೊಡಲಿಲ್ಲ ಎಂದು ಕೂಡಾ ಆಶಿತಾ ಹೇಳಿಕೊಂಡಿದ್ದಾರೆ. ಹೇಳಿದಂತೆ ಕೇಳದಿದ್ದಕ್ಕೆ  ಟೇಕ್ ಚೆನ್ನಾಗಿ ಬಂದರೂ, ಮತ್ತೆ ರಿಟೇಕ್ ಮಾಡಿಸುತ್ತಿದ್ದರು ಎಂದು ಹೆಸರು ಹೇಳದೇ ನಿರ್ದೇಶಕರೊಬ್ಬರ ಬಗ್ಗೆ ನೋವು ನಟಿ ನೋವು ತೋಡಿಕೊಂಡಿದ್ದಾರೆ.

 

Share Post

Leave a Reply

Your email address will not be published.