ಐಕ್ಯತಾ ಯಾತ್ರೆ ಯಾತ್ರೆಯಾಗಿ ಉಳಿದಿಲ್ಲ, ಅದು ಆಂದೋಲನವಾಗಿದೆ; ಡಿ.ಕೆ.ಶಿವಕುಮಾರ್‌

ಬೆಂಗಳೂರು; ಭಾರತ್‌ ಜೋಡೋ ಯಾತ್ರೆ ಈಗ ಕೇವಲ ಯಾತ್ರೆಯಾಗಿ ಉಳಿದುಕೊಂಡಿಲ್ಲ.. ಎಲ್ಲೆಡೆ ಭಾರಿ ಜನಬೆಂಬಲ ವ್ಯಕ್ತವಾಗ್ತಿದೆ. ಈ ಹಿನ್ನೆಲೆಯಲ್ಲಿ ಐಕ್ಯತಾ ಯಾತ್ರೆ ಈಗ ದೊಡ್ಡ ಆಂದೋಲನವಬಾಗಿ ಮಾರ್ಪಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿಯವರು ದೇಶದ ರಾಜಕಾರಣವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.

ಈ ಹಿಂದೆ ಇಂದಿರಾಗಾಂಧಿಯವರು ಎಲ್ಲದರೂ ಬಂದರೆ ಅವರನ್ನು ನೋಡಲು ಲಕ್ಷಾಂತರ ಜನರು ಸೇರುತ್ತಿದ್ದರು. ಈಗ ರಾಹುಲ್‌ ಗಾಂಧಿಯವರನ್ನು ನೋಡಲು ಕೂಡಾ ಅದೇ ಪ್ರೀತಿಯಿಂದ ಲಕ್ಷಾಂತರ ಜನರು ಸೇರುತ್ತಿದ್ದಾರೆ.  ರಾಹುಲ್ ಗಾಂಧಿಯವರು ಸ್ಪಷ್ಟ ಗುರಿಯೊಂದಿಗೆ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಇದೇ ವೇಳೆ ತಿಳಿಸಿದರು. ರಾಹುಲ್ ಗಾಂಧಿ ಫಿಸಿಕಲ್ ಫಿಟ್ ನೆಸ್ ಬಗ್ಗೆ ಮಾತು ಬೇಡ. ಅವರ ಮೆಂಟಲ್ ಫಿಟ್ ನೆಸ್, ಕಮಿಟ್ ಮೆಂಟ್ ದೊಡ್ಡದು ಎಂದು ಡಿ.ಕೆ.ಶಿವಕುಮಾರ್‌, ರಾಹುಲ್‌ ಗಾಂಧಿ ಪಾದಯಾತ್ರೆ ಮೂಲಕ ಪಕ್ಷಕ್ಕೆ ಶಕ್ತಿ ತುಂಬುತ್ತಿದ್ದಾರೆ ಎಂದು ತಿಳಿಸಿದರು.

Share Post