ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ..?; ಹೀಗೆ ಪರೀಕ್ಷೆ ಮಾಡಿಕೊಳ್ಳಿ..

ಬೆಂಗಳೂರು; ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಆರು ದಿನ ಬಾಕಿ ಇದೆ. ಮೇ ಹತ್ತರಂದು ಮತದಾನ ನಡೆದರೆ, ಮೇ ಹದಿಮೂರರಂದು ಫಲಿತಾಂಶ ಬರಲಿದೆ. ಹೀಗಾಗಿ ಮತ ಬೇಟೆ ಜೋರಾಗಿ ನಡೆಯುತ್ತಿದೆ. ಈಗ ಮನೆ ಮನೆ ಪ್ರಚಾರ ಜೋರಾಗಿ ನಡೆಯುತ್ತಿದೆ. ಅಶ್ವಾಸನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ನಡುವೆ ಮತದಾರರಿಗೆ ನಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬ ಅನುಮಾನ ಇದೆ. ಇಂತಹವರು ಆನ್‌ಲೈನ್‌ನಲ್ಲೇ ಪರೀಕ್ಷೆ ಮಾಡಿಕೊಳ್ಳಬಹುದು.

ಈ ಬಾರಿ ಲಕ್ಷಾಂತರ ಜನರು ಹೊಸದಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇನ್ನು ಚುನಾವಣಾ ಆಯೋಗ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಈ ಪಟ್ಟಿ, ಭಾರತದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕ್ಷೇತ್ರ, ಮತದಾರರ ಹೆಸರು ಸೇರಿದಂತೆ ಎಲ್ಲಾ ವಿವರಗಳಿರುವ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

ಸದ್ಯ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ, ಇಲ್ಲವೋ ಎಂದು ಪರೀಕ್ಷೆ ಮಾಡಿಕೊಳ್ಳಬಹುದು. ಈಗ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ದೋಷವನ್ನು ಸರಿಪಡಿಸುವುದಕ್ಕೂ ಆಗುವುದಿಲ್ಲ. ಆದ್ರೆ, ನಿಮ್ಮ ಹೆಸರು ಇದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದಕ್ಕೆ ಅಡ್ಡಿಯಿಲ್ಲ.

http://electoralsearch.in ವೆಬ್‌ಸೈಟ್‌ನಲ್ಲಿ ಎರಡು ವಿಧಾನದಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂದು ಪರಿಶೀಲಿಸಬಹುದು. ಮೊದಲ ವಿಧಾನದಲ್ಲಿ ವೆಬ್‌ಸೈಟ್‌ನಲ್ಲಿ ಸರ್ಚ್‌ ಬೈ ಡಿಟೇಲ್ಸ್‌ ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲಿ ನಿಮ್ಮ ಹೆಸರು, ವಯಸ್ಸು, ಊರು, ತಾಲ್ಲೂಕು, ಜಿಲ್ಲೆ ಆಯ್ಕೆ ಮಾಡಿಕೊಂಡು ಕ್ಯಾಪ್ಚಾ ಕೋಡ್‌ ನಮೂದಿಸಬೇಕು. ಆಗ ನಿಮ್ಮ ಹೆಸರು ಪಟ್ಟಿಯಲ್ಲಿ ಇದ್ದರೆ ಪರದೆಯ ಮೇಲೆ ತೋರಿಸುತ್ತದೆ.
ಎರಡನೇ ವಿಧಾನದಲ್ಲಿ ಅದೇ ವೆಬ್‌ಸೈಟ್‌ನಲ್ಲಿ ನಿಮ್ಮ ಬಳಿ ಈಗಾಗಲೇ ಮತದಾರರ ಗುರುತಿನ ಚೀಟಿ ಇದ್ದರೆ ಅದರಲ್ಲಿರುವ ಎಪಿಕ್‌ ಸಂಖ್ಯೆಯನ್ನು ಬಳಸಿ, ಹೆಸರು ಇದೆಯೋ, ಡಿಲೀಟ್‌ ಆಗಿದೆಯೋ ಎಂಬುದನ್ನು ಪರೀಕ್ಷಿಸಬಹುದು. ಆಗ ವೆಬ್‌ಸೈಟ್‌ನಲ್ಲಿ ಸರ್ಚ್‌ ಬೈ ಎಪಿಕ್‌ ಬಟನ್‌ ಆಯ್ಕೆ ಮಾಡಬೇಕು. ಅಲ್ಲಿ ನಿಮ್ಮ ಮತದಾರ ಗುರುತಿನ ಚೀಟಿ ಸಂಖ್ಯೆ ನಮೂದಿಸಬೇಕು. ನಂತರ ಕ್ಯಾಪ್ಚಾ ಕೋಡ್‌ ನಮೂದಿಸಿದರೆ ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ ಪೂರ್ತಿ ವಿವರ ಪರದೆಯ ಮೇಲೆ ತೋರಿಸುತ್ತದೆ.

Share Post