ಹಿರಿನ ನಟ, ನಿರ್ದೇಶಕ ದ್ವಾರಕೀಶ್‌ಗೆ ಗೌರವ ಡಾಕ್ಟರೇಟ್‌

ಬೆಂಗಳೂರು; ಸ್ಯಾಂಡಲ್‌ವುಡ್‌ ಕುಳ್ಳ, ನಟ ದ್ವಾರಕೀಶ್‌ ಗೆ ಗೌರವ ಡಾಕ್ಟರೇಟ್‌ ಘೋಷಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ದ್ವಾರಕೀಶ್‌ಗೆ ಡಾಕ್ಟರೇಟ್‌ ನೀಡಲಾಗುತ್ತಿದ್ದು, 57ನೇ ಘಟಿಕೋತ್ಸವದಲ್ಲಿ ಇದನ್ನು ಪ್ರದಾನ ಮಾಡಲಾಗುತ್ತದೆ.

ದ್ವಾರಕೀಶ್‌ ಅವರು ಕನ್ನಡ ಚಿತ್ರರಂಗಕ್ಕೆ ಮಾಡಿದ ಕಲಾ ಸೇವೆ ಗುರುತಿಸಿ ಈ ಗೌರವ ನೀಡಲಾಗುತ್ತಿದೆ. ಚಲನಚಿತ್ರ ವಿಭಾಗದಲ್ಲಿ ದ್ವಾರಕೀಶ್, ಕಾನೂನು ಅಟಾರ್ನಿ ಹಾಗೂ ನ್ಯಾಯ ಸಲಹೆಗಾರರ ವಿಭಾಗದಲ್ಲಿ ಅಮರನಾಥ ಗೌಡ, ವರ್ಣ ಚಿತ್ರಕಾರರ ವಿಭಾಗದಲ್ಲಿ ಡಾ.ಟಿ. ಅನಿಲ್ ಕುಮಾರ್ ಅವರಿಗೆ ಡಾಕ್ಟರೇಟ್‌ ಪ್ರದಾನ ಮಾಡಲಾಗುತ್ತದೆ. ಡಿಸೆಂಬರ್‌ 5 ರಂದು ಈ ಘಟಿಕೋತ್ಸವ ನಡೆಯಲಿದೆ ಎಂದು ತಿಳಿದುಬಂದಿದೆ.

 

Share Post

Leave a Reply

Your email address will not be published.