ಕರೆಂಟ್‌ ಬಿಲ್‌ ಕಟ್ಟಿ ಸಿದ್ದರಾಮಯ್ಯಗೆ ಅವಮಾನ ಮಾಡಬೇಡಿ; ಆರ್‌.ಅಶೋಕ್‌ ಕರೆ

ಬೆಂಗಳೂರು; ಯಾರೂ ಕರೆಂಟ್‌ ಬಿಲ್‌ ಕಟ್ಟಬೇಡಿ. ಬಿಲ್‌ ಪಾವತಿ ಮಾಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಬೇಡಿ ಎಂದು ಮಾಜಿ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು ನನಗೂ ಉಚಿತ ನಿಮಗೂ ಉಚಿತ ಎಂದು ಹೇಳಿದ್ದರು ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಈಗ ಮುಖ್ಯಮಂತ್ರಿಯಾಗಿದ್ದಾರೆ. ಈಗ ಅವರು ಉಚಿತ ಕರೆಂಟ್‌ ನೀಡಬೇಕು. ಇಲ್ಲದಿದ್ದರೆ ನಾವು ಬಿಲ್‌ ಕಟ್ಟಿದರೆ ಮುಖ್ಯಮಂತ್ರಿ ಹುದ್ದೆಗೆ ಅವಮಾನ ಮಾಡಿದಂತಾಗುತ್ತದೆ. ಹೀಗಾಗಿ ನಾನೇ ಕರೆಂಟ್‌ ಬಿಲ್‌ ಕಟ್ಟೋದಿಲ್ಲ ಎಂದು ಸಿದ್ದರಾಮಯ್ಯ ಅವರೇ ಹೇಳಿರುವುದರಿಂದ ಯಾರೂ ಬಿಲ್‌ ಕಟ್ಟಬಾರದು ಎಂದು ಹೇಳಿದ್ದಾರೆ.

ಸರ್ಕಾರದ ಬಂದ ಮೊದಲ ಕ್ಯಾಬಿನೆಟ್‌ನಲ್ಲಿ 5 ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕರು ಘೋಷಣೆ ಮಾಡಿದ್ದಾರೆ. ಹೀಗಾಗಿ ಇನ್ನು ಮುಂದೆ ಯಾರೂ 200 ಯೂನಿಟ್‌ಗೆ ವಿದ್ಯುತ್‌ ಬಿಲ್‌ ಕಟ್ಟಬಾರದು ಮತ್ತು ಮಹಿಳೆಯರು ಬಸ್ಸಿನಲ್ಲಿ ಟಿಕೆಟ್‌ ತೆಗೆದುಕೊಳ್ಳಬಾರದು ಎಂದರು.

Share Post