ಭುವನ ಸುಂದರಿಯಾಗ್ತಾಳಾ ಮಂಗಳೂರಿನ ಬೆಡಗಿ ದಿವಿತಾ ರೈ..?

ಬೆಂಗಳೂರು; ದಕ್ಷಿಣ ಅಮೆರಿಕದ ಲೌಸಿಯಾನಾದಲ್ಲಿ ನಾಳೆ ಬೆಳಗ್ಗೆ ಮಿಸ್‌ ಯೂನಿವರ್ಸ್‌ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ 86 ಸುಂದರಿಯರು ಪಾಲ್ಗೊಂಡಿದ್ದಾರೆ. ಭಾರದಿಂದ ನಮ್ಮ ಮಂಗಳೂರಿನ ಬೆಡಗಿ ದಿವಿತಾ ರೈ ಪಾಲ್ಗೊಂಡಿದ್ದಾರೆ. ದಿವಿತಾ ರೈಗೆ ಭುವನ ಸುಂದರಿ ಕಿರೀಟ ದಕ್ಕುವ ಬಗ್ಗೆ ಆಸೆಗಳು ಚಿಗುರಿವೆ.

2022ರಲ್ಲಿ ‘ದಿವಾ ಮಿಸ್ ಯೂನಿವರ್ಸ್’ ಟೈಟಲ್ ಅನ್ನು ದಿವಿತಾ ರೈ ಗೆದ್ದಿದ್ದಾರೆ. ಸದ್ಯ ದಿವಿತಾ ರೈ ಕುಟುಂಬ ಮುಂಬೈನಲ್ಲಿ ನೆಲೆಸಿದೆ. ದಿವಿತಾ ಮುಂಬೈನಲ್ಲೇ ಆರ್ಕಿಟೆಕ್ಚರ್‌ ಪದವಿ ಗಳಿಸಿದ್ದಾರೆ. ಬ್ಯಾಡ್ಮಿಂಟನ್‌ ಹಾಗೂ ಚಿತ್ರಕಲೆಯಲ್ಲಿ ದಿವಿತಾ ರೈ ವಿಶೇಷ ಆಸಕ್ತಿ ಹೊಂದಿದ್ದಾರೆ. ಮಾಡೆಲಿಂಗ್‌ ಅನ್ನು ದಿವಿತಾ ರೈ ತಮ್ಮ ವೃತ್ತಿಯಾಗಿ ಸ್ವೀಕಾರ ಮಾಡಿದ್ದಾರೆ.

2021ರಲ್ಲಿ ಭುವನ ಸುಂದರಿ ಟೈಟಲ್ ಅನ್ನು ಭಾರತದವರೇ ಆದ ಹರ್ನಾಜ್ ಸಂಧು ಗೆದ್ದಿದ್ದರು. ಇದೀಗ ದಿವಿತಾ ರೈ ಸರದಿ.

Share Post

Leave a Reply

Your email address will not be published.