ಬಿಜೆಪಿ ರೌಡಿಶೀಟರ್‌ಗಳು ಸೇರುತ್ತಿರುವ ವಿಚಾರ; ಅಲ್ಲಗೆಳೆದ ಸಿಎಂ ಬೊಮ್ಮಾಯಿ

ಬೆಂಗಳೂರು; ರೌಡಿ ಶೀಟರ್‌ಗಳು ಬಿಜೆಪಿ ಸೇರುತ್ತಿರುವ ವಿಚಾರ ಈಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸೈಲೆಂಟ್‌ ಸುನೀಲ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರು ಕಾಣಿಸಿಕೊಂಡಿದ್ದು, ಫೈಟರ್‌ ರವಿ ಬಿಜೆಪಿ ಸೇರ್ಪಡೆಯಾದ ವಿಚಾರವಾಗಿ ವಿಪಕ್ಷಗಳು ಬಿಜೆಪಿ ವಿರುದ್ಧ ಮುಗಿ ಬೀಳುತ್ತಿವೆ. ಈ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಸಮಜಾಯಿಷಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ನಾವು ರೌಡಿಗಳಿಗೆ ಅವಕಾಶ ನೀಡುವುದಿಲ್ಲ. ಯಾವುದೇ ರೌಡಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Share Post

Leave a Reply

Your email address will not be published.