ಆಯುಧಪೂಜೆಗೂ ಬಿಎಂಟಿಸಿ ಬಳಿ ದುಡ್ಡಿಲ್ಲವಾ..?; ಒಂದು ಬಸ್‌ಗೆ ನೂರು ರೂ. ಸಾಕಾ..?

ಬೆಂಗಳೂರು; ಬಿಎಂಟಿಸಿಗೆ ಆಯುಧ ಪೂಜೆ ಮಾಡೋದಕ್ಕೂ ಸಾಧ್ಯವಾಗದಷ್ಟು ಹಣದ ಮುಗ್ಗಟ್ಟು ಎದುರಾಗಿದೆಯಾ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ, ಬಿಎಂಟಿಸಿ ಈ ವರ್ಷ ಆಯುಧ ಪೂಜೆ ಮಾಡಲು ಬಸ್‌ ಒಂದಕ್ಕೆ ಕೇವಲ ನೂರು ರೂಪಾಯಿ ಬಿಡುಗಡೆ ಮಾಡಿದೆ. ಈ ಹಣಕ್ಕೆ ಹತ್ತು ನಿಂಬೆ ಹಣ್ಣು ಕೂಡಾ ಬರೋದಿಲ್ಲ. ಬಸ್‌ ಹೇಗೆ ಪೂಜೆ ಮಾಡೋದು ಅಂತ ಬಿಎಂಟಿಸಿ ಸಿಬ್ಬಂದಿ ಪ್ರಶ್ನೆ ಮಾಡುತ್ತಿದ್ದಾರೆ. 

ಬಿಎಂಟಿಸಿ ಆಡಳಿತ ಮಂಡಳಿಯ ಜಿಪುಣತನಕ್ಕೆ ಸಿಬ್ಬಂದಿ ಅಸಮಾಧಾನಗೊಂಡಿದ್ದಾರೆ. ಬಸ್​ಗಳನ್ನು ಚೆನ್ನಾಗಿ ಅಲಂಕಾರ ಮಾಡುವ ಸಿಬ್ಬಂದಿಯ ಆಸೆಗೆ ಬಿಎಂಟಿಸಿ ಆಡಳಿತ ಮಂಡಳಿ ಅಕ್ಷರಶಃ ತಣ್ಣೀರೆರಚಿದೆ. ಬಿಡುಗಡೆ ಮಾಡಿರುವ 100 ರೂ.ಗಳಲ್ಲಿ ಒಂದು ಬಸ್​ಗೆ ಪೂಜೆ ಮಾಡೋಕೆ ಆಗುತ್ತಾ‌‌? ಬಿಎಂಟಿಸಿ ಕೊಟ್ಟ ಹಣದಲ್ಲಿ 10 ನಿಂಬೆಹಣ್ಣು ಕೂಡ ಬರೋದಿಲ್ಲ ಅಂತ ನೌಕರರು ಸಿಟ್ಟು ಮಾಡಿಕೊಂಡಿದ್ದಾರೆ. ಹಬ್ಬದ ದಿನ ಪೂಜೆ ನೆರವೇರಿಸಲು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. 100 ರೂ.ಗೆ ಬಸ್‌ಗಳನ್ನು ಸಿಂಗರಿಸಿ ಪೂಜೆ ಮಾಡಲು ಅಸಾಧ್ಯ ಎಂದು ಸಿಬ್ಬಂದಿ ಅಸಮಾಧಾನಗೊಂಡಿದ್ದಾರೆ.

Share Post

Leave a Reply

Your email address will not be published.