ಬೆಂಗಳೂರಿನಲ್ಲಿ ಇಂದಿನಿಂದ ತಂತ್ರಜ್ಞಾನ ಶೃಂಗಸಭೆ; ಮೋದಿ ವರ್ಚುಯಲ್‌ ಚಾಲನೆ

ಬೆಂಗಳೂರು; ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ತಂತ್ರಜ್ಞಾನ ಶೃಂಗಸಭೆ ನಡೆಯುತ್ತಿದೆ. ಇದು 25ನೇ ವರ್ಷದ ಸಮಾವೇಶವಾಗಿದ್ದು, ಮೂರು ದಿನಗಳ ಈ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆನ್‌ಲೈನ್‌ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಹಲವಾರು ಗಣ್ಯರು ಭಾಗವಹಿಸಿದ್ದಾರೆ. ವಿದೇಶಿ ಗಣ್ಯರು ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಕರ್ನಾಟಕದ ಪ್ರಮುಖ ತಂತ್ರಜ್ಞಾನ ಕಾರ್ಯಕ್ರಮವಾಗಿದ್ದು, ಇದು ಈಗ ರಜತೋತ್ಸವ ಆಚರಿಸ್ತಿದೆ. ಈ ಶೃಂಗಸಭೆಯಲ್ಲಿ ಭಾರತದ ವಿವಿಧ ರಾಜ್ಯಗಳಿಂದ 300ಕ್ಕೂ ಹೆಚ್ಚು ಸ್ಟಾರ್ಟ್‌‌ಅಪ್‌ಗಳು ಭಾಗವಹಿಸಿವೆ. ಇವು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಈ ಸಮಾವೇಶದಲ್ಲಿ ಪ್ರದರ್ಶಿಸಲಿವೆ. ಈ ಶೃಂಗಸಭೆಯಲ್ಲಿ ಸುಮಾರು 570 ಪ್ರದರ್ಶಕರು ಭಾಗವಹಿಸಿದ್ದಾರೆ.

Share Post

Leave a Reply

Your email address will not be published.