ಮದುವೆಯಾಗುತ್ತೇನೆಂದು ನಂಬಿಕೆ ದೈಹಿಕವಾಗಿ ಬಳಕೆ; ಕೈಕೊಟ್ಟವನ ವಿರುದ್ಧ ದೂರು

ಬೆಂಗಳೂರು; ಶಾದಿ ಡಾಟ್ ಕಾಮ್‍ನಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗುತ್ತೇನೆಂದು ನಂಬಿ ಲಾಡ್ಜ್‌ಗೆ ಕರೆದು ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ದೂರು ದಾಖಲಾಗಿದೆ. ಅನ್ಯಾಯಕ್ಕೊಳಗಾದ ಯುವತಿ ನೋಮನ್‌ ಷರೀಫ್‌ ಎಂಬಾತನ ವಿರುದ್ಧ ಡಿಜೆ ಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಯುವತಿ ಶಾದಿ ಡಾಟ್‌ ಕಾಂನಲ್ಲಿ ತನ್ನ ಹೆಸರು ದಾಖಲಿಸಿದ್ದಳು. ಆರೋಪಿ ನೋಮನ್‌ ಷರೀಫ್‌ ಕೂಡಾ ಇದರಲ್ಲಿ ತನ್ನ ಪ್ರೊಫೈಲ್‌ ಹಾಕಿಕೊಂಡಿದ್ದ. ಯುವತಿಯನ್ನು ಇದೇ ವೆಬ್‌ಸೈಟ್‌ನಿಂದ ಪರಿಚಯ ಮಾಡಿಕೊಂಡು ಚಾಟ್‌ ಮಾಡಿದ್ದಾನೆ. ಅದು ಪ್ರೀತಿಗೆ ತಿರುಗಿದೆ. ನಂತರ ಮದುವೆಯಾಗುತ್ತೇನೆಂದು ನಂಬಿಸಿರುವ ಆರೋಪಿ, ನನ್ನ ಪೋಷಕರನ್ನು ಪರಿಚಯ ಮಾಡಿಸುತ್ತೇನೆ ಎಂದು ಓಯೋ ರೂಮ್‌ಗೆ ಕರೆಸಿಕೊಂಡಿದ್ದಾನೆ. ಆದ್ರೆ ಪೋಷಕರು ಬಂದಿಲ್ಲ ಎಂದಿದ್ದ ಆತ, ಹೇಗೂ ಹೋಟೆಲ್‌ಗೆ ಬಂದಿದ್ದೀವಿ ಎಂದು ಹೇಳಿ ಲೈಂಗಿಕವಾಗಿ ಆಕೆಯನ್ನು ಬಳಸಿಕೊಂಡಿದ್ದನಂತೆ. ಅನಂತರವೂ ಹಲವು ಬಾರಿ ಹೀಗೆಯೇ ಮಾಡಿದ್ದಾನೆ. ಆದ್ರೆ ಈಗ ಬೇರೊಬ್ಬಳನ್ನು ಮದುವೆಯಾಗಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ.

Share Post